ಕತ್ತಲೆಯು ಕಳೆದಾಗ ಸಿಹಿಗನಸು ಕಂಡಾಗ ಬೆಳಕೆಲ್ಲಿತ್ತೋ?
ಬೆಳಕು ಸರಿದು ಕತ್ತಲೆಯು ಹರಿದಾಗ ಕನಸೆಲ್ಲಿತ್ತೋ?
ಕನಸೇ ಸತ್ತು ಮನಸು ನಸುನಗುತಿರುವಾಗ ಸೊಗಸೆಲ್ಲಿತ್ತೋ?
ಸೊಗಸು ಕಳೆದು ಹೋದಾಗ ವಯಸೆಲ್ಲಿತ್ತೋ?
ವಯಸೆಲ್ಲಿ ಹೋಯಿತೋ? ಬಾಲ್ಯದ ಒಡನೆಯಾ ? ಯೌವ್ವನದ ಒಡನೆಯಾ ?
ಬಾಲ್ಯವೂ ಅಲ್ಲ , ಯೌವನವೂ ಅಲ್ಲ , ಕನಸಿನೊಡನೆ ಸಾಗಿ ಹೋಗಿತ್ತಾ?
ಮನಸಿನೊಡನೆ ಸಾಗಿ ಹೋಗಿತ್ತಾ? ಯಾವುದರೊಂದಿಗೆ ಆಗಲಿ ಬೆಳಕು ಮೂಡುವ ಹೊತ್ತಿಗೆ ಚಿಗುರಿ ಮೂಡಲಿ ..
ಮನಸು ಕೂಗಲಿ, ಕನಸು ಮೂಡಲಿ..
ಮತ್ತೆ ಬೆಳಕಾಗಲಿ ,
ಕತ್ತಲಾಗದಿರಲಿ !
ಮನಸು ನಗುತಿರಲಿ...
Subscribe to:
Post Comments (Atom)

No comments:
Post a Comment